ಶನಿವಾರ, ಜುಲೈ 8, 2017




ವಿಜಯಭಾಸ್ಕರ 





ಗಟ್ಟಿ ಮನಸು ಮಾಡಿದೆ.
ನೀ ಕಿರುಚ್ಚಿದ್ದು ಕೇಳಲಿಲ್ಲ
ಯಾಕೆಂದರೆ ನಾನು ಗಟ್ಟಿ ಮನಸು ಮಾಡಿದ್ದೆನೆ.
ದುಂಬಲು ಪ್ರೀತಿ ಇದ್ದರು ತಕರಾರಿಲ್ಲ.
ಮುತ್ತಿನ ಝೇಂಕಾರವಿದ್ದರು ಪರವಾಗಿಲ್ಲ.
ನಾ ಮರೆತು ಗಟ್ಟಿ ಮನಸು ಮಾಡಿದ್ದಾಗಿದೆ... 
ತಡವಾಯಿತು ಈಗ...ಕೋಪ ಚುರು ನೆತ್ತಿಗೆ ಜಾಸ್ತಿ ನನಗೆ.




ಹೊಗೆ.
ಮೂಳೆ ಬೂದಿ ಮಸಣದಲ್ಲಿ.
ಮಡಿಕೆ ಬೂದಿ ಗಂಗೆಯಲ್ಲಿ.
ಕಾಲಚಕ್ರ ಉರುಳಿದಂತೆ ಮಣ್ಣಲ್ಲಿ ನಶಿಸಲಿದೆ ಮೈ.
ಕರಾಳ ರಾತ್ರಿ.
ಭಾರ ಮನಸ್ಸು
ತುಂಬು ಕಣ್ಣೀರು 
ಸುಡುತ್ತಿದೆ ಮೈ ಮನ,ದಣಿವು ನೀಗಿಸಲು
 ಉಸಿರು ನಿಲ್ಲಬೇಕು 

ಗುರುವಾರ, ಜುಲೈ 6, 2017

ಸಂಪಿಗೆ ಕವಿತೆಗಳು... 

 ವಿಜಯಭಾಸ್ಕರ 


ಆವತ್ತು ಚುಚ್ಚಿದ್ದು
ಕಣ್ಣು ರೆಪ್ಪೆ
ಜಾರಿ ಹೊದ ಹನಿ
ಮಾಗಿದ ಹೃದಯ
ನಕಲು ಪ್ರೀತಿ
ಬಿಂಬ ನೋಟ
ಆವತ್ತು ಅತ್ತಿದ್ದೆ.
ನೀ ಬಿಟ್ಟೆ ಎಂದು ಅಲ್ಲ.ಒಲವು ಸತ್ತೊಯಿತು ಅಂಥ. !


ಮತ್ತೆ ....
ಮತ್ತೆ.
ಸರಿದಿದೆ ಸಮಯ
ಮೊದಲಿನ ಹಾಗೆ ಅಲ್ಲ.
ಬೆಸುಗೆ, ಕಾರ್ಮೋಡ, ಜಳ ಬಿಸಿಲು
ಎಲ್ಲವೂ ಬದಲಾಗಿದೆ ಮೊದಲಿನ ಹಾಗೆ ಅಲ್ಲ.
ಕನಸು ಕಾಣುವ ಪರಿ,ಅವಳು ಚಿರುವ ಶಬ್ದ
ಬದಲಾಗಿದೆ .... !

ಮತ್ತೆ..... ಬದಲಾದೆತು
ನಾ ಅರಿಯೆ..

ವಿಜಯಭಾಸ್ಕರ  ಗಟ್ಟಿ ಮನಸು ಮಾಡಿದೆ. ನೀ ಕಿರುಚ್ಚಿದ್ದು ಕೇಳಲಿಲ್ಲ ಯಾಕೆಂದರೆ ನಾನು ಗಟ್ಟಿ ಮನಸು ಮಾಡಿದ್ದೆನೆ. ದುಂಬಲು ಪ್ರೀತಿ ಇದ್ದರು ...